Wednesday, September 29, 2010

ನರನಿಗಿಂತ ನಾನೇನು ಕಡಿಮೆಯೇ .....?

 
 ಹಗಲ ಹೊಂಗಿರಣವೇ, ಆಗೊಂದು
 ಈಗೊಂದು ತುಸು ನಸು ನಗು ಬೀರಿ,
ಒಮ್ಮೆ ನಾಚಿ ಕೆಂಪಾಗಿ,ಮಂಕಾಗುವೆ,
ಅಂತು ಇಂತೂ ದಿನ ಸರಿಸಿ ಇರುಳಿಗೆ.
 
ಮತ್ತದೇ ಕಂಡೂಕಾಣದ ಹಗಲು ಹಗಲಲ್ಲ
ಮುಸ್ಸಂಜೆ, ಮೊದಲೇ ಅಲ್ಲ
ನಿನ್ನ ಸೆರೆಹಿಡಿದಿಡಬೇಕು ಇಲ್ಲೇ
ಕೈಗೆ ಸಿಗುವೆ ನೀನೆಲ್ಲಿ...?
 ಮರೆಯಾಗುವೆ ಮೋಡದೊಳಗೆ
 
ಆ ಮೋಡವೋ,ಅದು ನಿನ್ನಂತೆ ಚಂಚಲ
ಹಗಲು ಹೊಗೆಯಾಗಿ,ಇರುಳು ದಗೆಯಾಗಿ
ಒಮ್ಮೆ ಕೊರೆವ ಚಳಿಯಾಗಿ,ಮನಬಂದಂತೆ
ಹರಿದಾಕಾರದಲಿ,ಹೊರೆಹೊರೆಯಾಗಿ
ದೈತ್ಯಾಕಾರದಲಿ ದಾಂಧಲೆ ಮಂದಗತಿಯಲಿ
 
 ನುಗ್ಗಬೇಕು ಮಾನವು ನಿನ್ನೊಳಗೆ
ಕೋಪ ಭುಗಿಲ್ಲೆದ್ದರೆ,ಕರಗಿ ಕಣ್ತುಂಬಿ
 ದಳದಳನೆ ಕಣ್ಣೀರ ಧಾರೆಯೊಡನೆ
ಬೋರ್ಗರೆದು  ಆರ್ಭಟಿಸಿ ,ಜಟೆಯೋದರಿ
 ಬೆಂಕಿಯ ಮಿಂಚು ಹರಡಿ,
 
 ಶರಧಿ ವುಕ್ಕುಕ್ಕಿ ಪೂತ್ಕರಿಸಿ ,
 ಗಿಡ ಮರ ಜನ ಮನೆ ಬೆಳೆಎಲ್ಲವ
 ನುಂಗಿ ನುಗ್ಗುವೆ, ದ್ವ್ಹಂಸ ಮಾಡಿ  ಹಿಗ್ಗುವೆ,
         ಧುಮುಗುಡುತ ಒಮ್ಮೆಗೆ ಶಾಂತವಾಗಿ,
 ಅನಾಸಕ್ತಿ ತೋರುವೆ, ಅನಾವೃಷ್ಟಿ ಬೀರುವೆ
 
ತನ್ನಂತೆ ತಾ ಮೆರೆವ ನರಗೇನು
 ನಾ ಕಡಿಮೆ...ಎನುವುದೇ ನಿನ್ನ
 ವಾದವೇ ?ತಪ್ಪಿಲ್ಲ ಬಿಡು      

10 comments:

  1. Olle Kavana...olagina bhaava tumba satya enisitu...

    ReplyDelete
  2. ಜ್ಯೋತಿಯವರೇ ನಿಮ್ಮ ಉತ್ತಮ ಪ್ರತಿಕ್ರಿಯೆಗೆ,ಮತ್ತು ನಮ್ಮತಾಣಕ್ಕೆಭೇಟಿ ನೀಡಿದ್ದಕ್ಕಾಗಿ
    ಧನ್ಯವಾದಗಳು. ಯಾವಾಗಲು ಬರುತ್ತಿರಿ...

    ReplyDelete
  3. ಚಿತ್ರ ಮತ್ತು ಚಿತ್ರಣ ಎರಡೂ ಸೊಗಸು.
    ಶುಭಾಶಯಗಳು
    ಅನ೦ತ್

    ReplyDelete
  4. ಬಹಳ ಚೆನ್ನಾಗಿದೆ ನಿಮ್ಮ ಎರಡನೇ ಬ್ಲಾಗ್. ಅಭಿನ೦ದನೆಗಳು ಕಲಾವತಿಯವರೇ, ಇದು ನಿಮ್ಮ ಎರಡನೇ ಕವನ ಸ೦ಕಲನವೇ? ಕವನ ಹಾಗೂ ಚಿತ್ರ ಸು೦ದರವಾಗಿವೆ. ಮು೦ದುವರೆಸಿ.

    ReplyDelete
  5. ಅನಂತರಾಜ್ ರವರೆ ನಿಮ್ಮ ಉತ್ತಮ ಅಭಿಪ್ರಾಯಕ್ಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.
    ನಮ್ಮ ಬ್ಲಾಗ್ ಗೆ ಫಾಲೋವೆರ್ಸ್ ಆಗಿದ್ದಕ್ಕೆ ಧನ್ಯವಾದಗಳು.

    ReplyDelete
  6. ಪ್ರಭಾಮಣಿ ಯವರೇ ನಿಮ್ಮ ಆತ್ಮೀಯ ಅಭಿಪ್ರಾಯಕ್ಕೆ ಧನ್ಯವಾದಗಳು.ನಿಮ್ಮ ಪ್ರಶ್ನೆ ಯೇ ಉತ್ತರವಾಗಬಹುದೇನೋ ಎನಿಸುತ್ತಿದೆ

    ReplyDelete
  7. sushma ravare nimma abhiprayakkaagi mattu namma blog ge bheti kottiddakkaagi dhanyavadagalu

    ReplyDelete