Sunday, July 6, 2014

ಆತ್ಮ ಸುನಾದಕೆ ನಿತ್ಯ ನಿವೇದನೆ 




ಅಸಹಾಯಕತೆ ಅಗೋಚರ
ಶಕ್ತಿಯ ಬೆಂಬಲವ  ನಂಬಿ  
ನಡೆವ ದಾರಿ ಧೈರ್ಯಕೆ ಬುನಾದಿ
ಸಾವಿರ ಸಮಸ್ಯೆಯ ಸವಾಲಿನಲೂ
ದುತ್ತೆಂದು ಮನದೆದುರು  ದುಮುಕುವ
ಅಗೋಚರಿಯೇ ಸಹಚಾರಿ
ಎಲ್ಲನಿನ್ನ ಲೀಲೇ ಸಕಾರಕೂ ...!!!
ಎಂದುದ್ಘರಿಸಿ...... 
ನಕಾರಕೂ .. ನೀನಿತ್ತಂತಾಗಲೆಂದು
ನಿಟ್ಟುಸಿರಿಳಿಸಿ.....  
ಅದೃಶ್ಯ ಅಮೂರ್ತವೇ
ಅನಂತ ಆದಿಗೂ  ಅನಾದಿಗೂ
ಅಗೋಚರ ಅಂತಃ ಶಕ್ತಿ
ಸಾಧನಾಯುಕ್ತಿ
ಮನವ ಸಂತೈಸುವ ಮೂರ್ತ
ರೂಪ ಮುಂದಿರಿಸಿ
ಜ್ಯೋತಿ ಬೆಳಗಿಸಿ, ಪುಷ್ಪವಿರಿಸಿ 
ಗಂಧ ಪೂಸಿ
ಪರಿಮಳದ ಧೂಪ ಹರಿಸಿ,
ನೈವೇದ್ಯವಿರಿಸಿ
ಕರಜೋಡಿಸಿ, ಕಣ್ಮುಚ್ಚಿ
ಸರ್ವೇ ಜನಾಹ ಸುಖಿನೋ ಭವಂತು ,
ಸರ್ವ ಕಾರ್ಯ ಸಿದ್ಧಿರಸ್ತು ,
ಎಂದು ಸ್ಮರಿಸಿ, ಸಂತುಷ್ಟಿಯಲಿ  
ಸಾಂತ್ವನಗೊಳುತ ಸಕಲ ಜೀವಿ
ಸಾಗುವವು ಸಕಾರ್ಯಗಳಲಿ
ಸ್ಮರಿಸುವವು ಸಂಕಷ್ಟಗಳಲಿ  
ಆತ್ಮ ಸುನಾದಕೆ ನಿತ್ಯ ನಿವೇದಿಸಿ...
ನಡೆವವು ಬದುಕ ದಾರಿಯಲಿ

No comments:

Post a Comment